3ನೇ ಟೆಸ್ಟ್​ ಗೆಲುವು ಹೆಚ್ಚಿಸಿತು ಟೀಮ್​ ಇಂಡಿಯಾ ವಿಶ್ವಾಸ..

ಟೀಮ್​ ಇಂಡಿಯಾ ಗುರುವಾರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವನ್ನು ಆಡಲಿದ್ದು, ವಿಶ್ವಾಸಲದಲ್ಲಿದೆ. ಕೊಹ್ಲಿ ಪಡೆಯ ಆತ್ಮವಿಶ್ವಾಸ ವೃದ್ಧಿಸಲು ಒಬ್ಬ ಆಟಗಾರ ಪ್ರಮುಖ ಕಾರಣ ವಹಿಸಿದ್ದಾರೆ. ಟೀಮ್​ ಇಂಡಿಯಾ ವರ್ಷದ ಮೊದಲ ಟೆಸ್ಟ್​ ಸರಣಿಯನ್ನು ಕೈ ಚೆಲ್ಲಿದೆ. ಆದ್ರೆ ಜೋಹಾನ್ಸ್​​ಬರ್ಗ್​​​ನಲ್ಲಿ ಸಿಕ್ಕ ಆ ಗೆಲುವು ಬ್ಲ್ಯೂ ಬಾಯ್ಸ್​ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಅಲ್ಲದೆ ಸೋಲುಗಳಿಂದ ಕಂಗೆಟ್ಟಿದ್ದ ಟೀಮ್​ ಇಂಡಿಯಾಕ್ಕೆ ಹೊಸ ಬೂಸ್ಟ್​ ನೀಡಿದೆ. ಇನ್ನು ಬ್ಲ್ಯೂ ಬಾಯ್ಸ್​ ಪ್ರವಾಸದಲ್ಲಿ ಮತ್ತೊಂದು ಪರೀಕ್ಷೆಗೆ ಒಳಗಾಗಲಿದೆ.

ಗುರುವಾರದಿಂದ ಕೇಪ್​ಟೌನ್​ನಲ್ಲಿ ಆರಂಭವಾಗಲಿರುವ ಏಕದಿನ ಪಂದ್ಯಗಳಿಗೆ ಟೀಮ್​ ಇಂಡಿಯಾ ಸರ್ವ ಸನ್ನದ್ಧವಾಗಿದೆ. ಈಗಾಗಲೇ ಟೀಮ್​ ಇಂಡಿಯಾ ಭರ್ಜರಿ ಅಭ್ಯಾಸವನ್ನು ನಡೆಸಿದ್ದು, ಏಕದಿನ ಸರಣಿಯನ್ನು ಗೆಲುವಿನ ವಿಶ್ವಾಸ ಹೊಂದಿದೆ. ಇನ್ನು ಟೀಮ್​ ಇಂಡಿಯಾ ಮೈದಾನದಲ್ಲಿ ಇನ್ನು ಬಲಿಷ್ಠ ಆಗೋಕೆ ಈ ಒಬ್ಬ ಪ್ಲೇಯರ್​ ಎಂಟ್ರಿ ತಂಡಕ್ಕೆ ಬೂಸ್ಟ್​ ನೀಡಿದೆ. ಹೌದು, ಟೆಸ್ಟ್​ ಸರಣಿಯಲ್ಲಿ ವಿಕೆಟ್​ ಹಿಂದೆ ಧೋನಿ ಅನುಪಸ್ಥಿತಿಯನ್ನು ಬಹುವಾಗಿ ಮಿಸ್ ಮಾಡಿಕೊಂಡಿದ್ದ ಟೀಮ್​ ಇಂಡಿಯಾಗೆ, ಧೋನಿ ಮತ್ತೆ ಪ್ರವೇಶ ಮಾಡಿದ್ದಾರೆ. ಇದ್ರಿಂದ ಕೊಹ್ಲಿ ಪಡೆಯ ಆತ್ಮ ವಿಶ್ವಾಸ ದ್ವಿಗುಣವಾಗಿದೆ. ಪಾರ್ಥಿವ್​ ಪಟೇಲ್​, ದಿನೇಶ್​ ಕಾರ್ತಿಕ್​ ಸಿಕ್ಕ ಅವಕಾಶದಲ್ಲಿ ಕ್ಯಾಚ್​ಗಳನ್ನು ಕೈ ಚೆಲ್ಲಿ ಎಲ್ಲರ ಟೀಕೆಗೆ ಗುರಿಯಾಗಿದ್ದರೆ, ಬ್ಲ್ಯೂ ಜೆರ್ಸಿಯಲ್ಲಿ ಟೀಮ್​ ಇಂಡಿಯಾ ಆತ್ಮ ವಿಶ್ವಾಸ ಮೂರು ಪಟ್ಟು ಹೆಚ್ಚಾಗಲಿದೆ. ಅದಕ್ಕೆ ಮೂಲಕ ಕಾರಣ ಮಹೇಂದ್ರ ಸಿಂಗ್​ ಧೋನಿ. ಮಾಹಿ ಒಬ್ಬರು ವಿಕೆಟ್​ ಹಿಂದೆ ಇದ್ರೆ, ಎದುರಾಳಿಗಳಿಗೆ ಭಯ. ಮೈದಾನದಲ್ಲಿ ಹೆಣೆದುಕೊಂಡ ಯೋಜನೆಗಳನ್ನು ಶಿಸ್ಥು ಬದ್ಧವಾಗಿ ಕಾರ್ಯರೂಪಕ್ಕೆ ತರುವಲ್ಲಿ ಮಾಹಿ ಸಿದ್ಧ ಹಸ್ತರು. ಹೀಗಾಗಿ ಏಕದಿನ ಸರಣಿಯಲ್ಲಿ ಟೀಮ್​ ಇಂಡಿಯಾ ಹೊಸ ರೂಪದಲ್ಲಿ ಮೈದಾನಕ್ಕೆ ಎಂಟ್ರಿ ನೀಡಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನ ಕನಸು ಕಾಣುತ್ತಿದೆ.

ಸ್ಪೋರ್ಟ್ಸ್​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *