ಹಾಸನ ಜಿಲ್ಲೆಗೆ ಬೇಕಂತೆ 372 ಬೋರ್​ವೆಲ್​ಗಳು…! ​

ಭೀಕರ ಬರಗಾಲದಲ್ಲಿ ತತ್ತರಿಸಿರೋ ರಾಜ್ಯದಲ್ಲಿ ನೀರಿಗಾಗಿ ಭಾರಿ ಲಾಬಿ ನಡೆಯುತ್ತಿದೆ.   ಹನಿ ನೀರು ಪಡೆಯಲು ಒಬ್ಬೊಬ್ಬರದ್ದು ಒಂದೊಂದು ರೀತಿಯ  ಪ್ರಯತ್ನ. ಹೀಗಿರೋ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿನ ಜನರ ಕುಡಿಯೋ ನೀರಿನ ಬವಣೆ ತಗ್ಗಿಸಲು  ಹೊಸ ಬೋರ್ ವೆಲ್ ಗಳನ್ನ ಕೊರೆಸಿಕೊಡುವಂತೆ ಮಾಜಿ ಪ್ರಧಾನಿ ದೇವೇಗೌಡರು,  ಗ್ರಾಮೀಣಾಭಿವೃದ್ದಿ ಇಲಾಖೆಗೆ ಮನವಿ ಮಾಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಜನರ ನೀರಿನ ಬವನೆ ತಪ್ಪಿಸಲು  ಬರೋಬ್ಬರಿ 372 ಬೋರ್ ಗಳನ್ನ ಕೊರೆಸಬೇಕು ಎಂದು  ಹೆಚ್​.ಡಿ.ದೇವೇಗೌಡರು ಗ್ರಾಮೀಣ ಅಭಿವೃದ್ದಿ ಇಲಾಖೆಗೆ ಸುದೀರ್ಘವಾದ ಪತ್ರವನ್ನೇ ಬರೆದಿದ್ದಾರೆ. ದೇವೇ ಗೌಡರ ಈ ಪತ್ರ ಇದೀಗ  ಗ್ರಾಮೀಣಾಭಿವೃದ್ದಿ ಇಲಾಖೆಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರದ  ಆದೇಶದ ಪ್ರಕಾರ ರಾಜ್ಯದೆಲ್ಲೆಡೆ  ಅಂತರ್ಜಲ ಮಟ್ಟ ಸಾಕಷ್ಟು ಕುಸಿತ ಕಂಡಿದೆ, ಈ ಹಿನ್ನೆಲೆಯಲ್ಲಿ ಹೊಸ ಬೋರ್ ಗಳನ್ನ ಕೊರೆಯದಂತೆ ಆದೇಶ ಕೂಡ ಮಾಡಿದೆ.  ಆದರೆ ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯೋ ನೀರಿನ ಅವಶ್ಯಕತೆ ಸಲುವಾಗಿ ಬೋರ್​ವೆಲ್​  ಕೊರೆಯಲು ಜಿಲ್ಲಾಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ.ಆದ್ರೂ  ಮಾಜಿ ಪ್ರಧಾನಿಗಳ ಬೇಡಿಕೆಯಂತೆ ಇಷ್ಟೊಂದು ಕೊಳವೆ ಬಾವಿಗಳನ್ನ ಕೊರೆಯಲು ಅವಕಾಶವಿಲ್ಲದ ಕಾರಣ  ದೇವೇಗೌಡರಿಗೆ ಸೂಕ್ತ ಉತ್ತರ ನೀಡಲಾಗದೆ ಇಲಾಖೆ  ಕೈ ಚೆಲ್ಲಿ ಕೂತಿದೆ.

0

Leave a Reply

Your email address will not be published. Required fields are marked *