ಅಪರಿಚಿತ ವಾಹನ ಹಾಯ್ದು ಸ್ಥಳದಲ್ಲೇ ಮೂರು ಸಾವು

ಹಾವೇರಿ: ಅಪರಿಚಿತ ವಾಹನ ಹಾಯ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದ ಬಳಿ ನಡೆದಿದೆ. ಸುರೇಶ ಮೈದೂರ (32), ಪಕ್ಕಿರೇಶ ಯತ್ತಿನಹಳ್ಳಿ (30) ಮತ್ತು ಲಕ್ಷ್ಮಣ ಹುಡೇದ (32) ಮೃತರು. ಇವರು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ನಿನ್ನೆ ರಾತ್ರಿ ಬೈಕ್ ನಲ್ಲಿ ಯಲಗಚ್ಛ ಗ್ರಾಮದಿಂದ ಚಿಕ್ಕಮರಳಿಹಳ್ಳಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾಗ ಕೋಣನತಂಬಗಿ ಗ್ರಾಮಕ್ಕೆ ತೆರಳೋ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

0

Leave a Reply

Your email address will not be published. Required fields are marked *