ಕೇರಳದಲ್ಲಿ ರಕ್ಕಸ ಮಳೆ ಹಾಗೂ ಭೂಕುಸಿತಕ್ಕೆ ಸುಮಾರು 26 ಮಂದಿ ಬಲಿ

ದೇವರನಾಡು ಕೇರಳದಲ್ಲಿ ರಕ್ಕಸ ಮಳೆ ಹಾಗೂಭೂಕುಸಿತಕ್ಕೆ ಸುಮಾರು 26 ಮಂದಿ ಬಲಿಯಾಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಜನ ಜೀವನ ಅಕ್ಷರಶಃ ನರಕವಾಗಿದೆ. ಭಾರಿ ಮಳೆ ಸುರಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಪೆರಿಯಾರ್​ ನದಿ ಅಪಾಯದ ಮಟ್ಟವನ್ನು ಮೀರಿದ್ದು, ಛೆರುತೊನಿ ಡ್ಯಾಂನಲ್ಲಿಯೂ ನೀರಿನ ಮಟ್ಟ ಏರಿದೆ. 2013ರಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ರನ್​ ವೇ ಪ್ರವಾಹಕ್ಕೆ ತುತ್ತಾಗಿತ್ತು.

ಇಡುಕ್ಕಿ ಜಿಲ್ಲೆಯಲ್ಲಿ 11, ಮಲಪ್ಪುರಂನಲ್ಲಿ 6, ಕೋಝಿಕೊಡ್​ದಲ್ಲಿ ಇಬ್ಬರು ಹಾಗೂ ವಯನಾಡ್​ನಲ್ಲಿ ಒಬ್ಬರು ಸಾವನ್ನಪ್ಪಿರುವುದು ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಗ್ಗು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿದ್ದು, ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕೋಝಿಕೊಡ್​ಗೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಉತ್ತರ ಕೇರಳ ಭಾಗದಲ್ಲಿ ಎನ್​ಡಿಆರ್​ಎಫ್​ ಪಡೆಗಳು ಕಾರ್ಯಾಚರಿಸುತ್ತಿವೆ.

26 ವರ್ಷದ ನಂತರ ಇಡುಕ್ಕಿ ಡ್ಯಾಂ ಗೇಟ್​ ಅನ್ನು ತೆರೆಯಲಾಗಿದೆ. ಕೇರಳದ ಮುಖ್ಯಂಮತ್ರಿ ಪಿಣರಾಯಿ ವಿಜಯನ್​ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಸೇನೆ, ನೌಕಾದಳ ಹಾಗೂ ಎನ್​ಡಿಆರ್​ಎಫ್​ ನೆರವು ಕೋರಲಾಗಿದ್ದು, ವಿವಿಧೆಡೆ ಎನ್​ಡಿಆರ್​ಎಫ್​ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಆರು ಪಡೆಗಳನ್ನು ಕಳುಹಿಸುವಂತೆಯೂ ಮನವಿ ಮಾಡಲಾಗಿದೆ, ವೈನಾಡಿನಲ್ಲಿ ಸಂಪರ್ಕ ಕಳೆದುಕೊಂಡಿರುವ ಪ್ರದೇಶಗಳಲ್ಲಿನ ಜನರ ರಕ್ಷಣೆಗೆ ನೌಕಾಪಡೆಯ ಅಗತ್ಯವಿದೆ ಎಂದಿದ್ದಾರೆ.

0

Leave a Reply

Your email address will not be published. Required fields are marked *