ಈ ಕೋಣದ ಬೆಲೆ 21 ಕೋಟಿ ರೂ.

ಚಂಡೀಗಢ: ಕೋಣಗಳು ಸಾಮಾನ್ಯವಾಗಿ ಹುಲ್ಲು ತಿನ್ನುತ್ವೆ. ಕುಡಿಯೋಕೆ ಯಾವುದಾದರೂ ಕೆರೆ ನೀರಾದ್ರೂ ಓಕೆ. ಆದರೆ, ಹರ್ಯಾಣದ ಈ ಕೋಣ ತಿನ್ನೋದು ಸೇಬು, ಕುಡಿಯೋದು ಕಾಸ್ಟ್ಲೀ ವಿಸ್ಕಿ ಅಂದ್ರೆ ನೀವು ನಂಬಲ್ಲ. ಆದರೆ, ಅದು ನಿಜಕ್ಕೂ ಇದನ್ನೆಲ್ಲ ಮಾಡುತ್ತೆ.

ಇನ್ನು ಇದರ ಬೆಲೆ ಕೇಳಿದ್ರೆ ನಿಮ್ ತಲೆ ತಿರುಗಿ ಬೀಳೋದೊಂದೇ ಬಾಕಿ. ಹೌದು ಇದ್ರ ಬೆಲೆ ಬರೋಬ್ಬರಿ 21 ಕೋಟಿ. ಸೇಬು ತಿಂದು, ವಿಸ್ಕಿ ಕುಡಿಯೋ ಈ ಕೋಣ ಪ್ರತಿ ಮಂಗಳವಾರ ಉಪವಾಸ ಇರುತ್ತೆ. ಇನ್ನೊಂದು ಅಚ್ಚರಿಯ ಸಂಗತಿ ಅಂದ್ರೆ, 1700 ಕೆ ಜಿ ತೂಗುತ್ತೆ.ದಿನಕ್ಕೆ ಮೂರು ಸಲ ಸ್ನಾನ ಮಾಡಿಸಿದ ನಂತರ ಇದರ ಮಾಲೀಕ ಸುಲ್ತಾನ್, ನಂತರ ಕೋಣವನ್ನು ಎಣ್ಣೆಯಿಂದ ಮಸಾಜ್ ಮಾಡ್ತಾರೆ. ದೇಶದ ವಿವಿಧೆಡೆ ಏರ್ಪಡಿಸೋ ಸ್ಪರ್ಧೆಗಳಿಗೆ ತಮ್ಮ ಕೋಣವನ್ನು ಕರೆದುಕೊಂಡು ಹೋಗಿದ್ದಾರೆ. ಈ ಸ್ಪರ್ಧೆಗಳಲ್ಲೆಲ್ಲ ಇದುವರೆಗೆ ನೂರಾರು ಪ್ರಶಸ್ತಿಗಳನ್ನು ಕೂಡ ಗೆದ್ದಿದೆ ಈ ಕಾಸ್ಟ್ಲೀ ಕೋಣ.

7 ವರ್ಷ 10 ತಿಂಗಳ ಈ ಕೋಣ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಕೂಡ ತನ್ನ ಕೋಡುಗಳ ಮೇಲೆ ಏರಿಸಿಕೊಂಡಿದೆ. ಇನ್ನೂ ಅಚ್ಚರಿ ಪಡೋ ವಿಚಾರ ಒಂದಿದೆ. ಹೌದು ಈ ಕೋಣದ ವೀರ್ಯ ದಶಲಕ್ಷ ರೂ.ಗಳಿಗೆ ಮಾರಾಟ ಆಗ್ತಿದೆ. ಐಷಾರಾಮಿ ಸೌಕರ್ಯಗಳನ್ನೆಲ್ಲ ಮನುಷ್ಯರಿಗಿಂತ ಹೆಚ್ಚಾಗಿ ಅನುಭವಿಸ್ತಿರೋ ಇದರ ವೀರ್ಯ ಮಾರಾಟದಿಂದ್ಲೇ, ಲಕ್ಷಾಂತರ ರೂಪಾಯಿ ಹಣ ಗಳಿಕೆ ಮಾಡಿರೋದಾಗಿ ಇದರ ಮಾಲೀಕ ಸುಲ್ತಾನ್ ಹೇಳ್ತಾರೆ.

ಪ್ರದೀಪ್ ಮಾಲ್ಗುಡಿ,  ನ್ಯಾಷನಲ್ ಡೆಸ್ಕ್ ,ಸುದ್ದಿ ಟಿವಿ

1+

Leave a Reply

Your email address will not be published. Required fields are marked *