ಹಿಜ್ಬುಲ್ ಮುಜಾಹಿದ್ದೀನ್ ಕಮ್ಯಾಂಡರ್ ಸೇರಿ ಇಬ್ಬರ ಹತ್ಯೆ

ಶ್ರೀನಗರ: ಕಾಶ್ಮೀರದ ಪುಲ್ವಾಮಾದಲ್ಲಿ ಮುಂಜಾನೆಯಿಂದ ನಡೆಯುತ್ತಿದ್ದ ಎನ್​ಕೌಂಟರ್​​ ಯಶಸ್ವಿಯಾಗಿದೆ. ಇಬ್ಬರು ಭಯೋತ್ಪಾದಕರನ್ನು ಭದ್ರತಾಪಡೆ ಹತ್ಯೆಗೈದಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮ್ಯಾಂಡರ್ ಸಮೀರ್ ಟೈಗರ್ ಮತ್ತು ಇನ್ನೊಬ್ಬ ಉಗ್ರ ಅಖೀಬ್ ಖಾನ್​ನನ್ನು ಹತ್ಯೆಗೈಯಲಾಗಿದೆ. ಸಮೀರ್ ಅನೇಕ ಕಲ್ಲೆಸೆತ ಪ್ರಕರಣದ ರೂವಾರಿಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಸೆರೆಗೆ ಭದ್ರತಾಪಡೆ ಬಲೆ ಬೀಸಿತ್ತು.

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ದ್ರಬ್​​ಗಾಂನಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯಿತು. ಉಗ್ರರು ಅವಿತಿದ್ದ ಮಾಹಿತಿ ಆಧರಿಸಿ ಸೇನೆ ಎನ್​​ಕೌಂಟರ್​​​ಗೆ ಮುಂದಾಗಿತ್ತು. ಈ ವೇಳೆ ಭಯೋತ್ಪಾದರು ಸೈನಿಕರ ಮೇಲೆ ಪ್ರತಿದಾಳಿ ನಡೆಸಿದರು. ಈ ವೇಳೆ ತಲಾ ಒಬ್ಬ ನಾಗರಿಕ ಮತ್ತು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

0

Leave a Reply

Your email address will not be published. Required fields are marked *