ಜೈಲಲ್ಲೇ ನಡೀತು 15 ಲಕ್ಷ ಡೀಲ್..!

ಮಂಗಳೂರು: ಜೈಲಿನಲ್ಲಿದ್ದ ವಿಚಾರಣಾಧೀನ ಖೈದಿಯೊಬ್ಬನಿಗೆ ಯದ್ವಾತದ್ವಾ ಹಲ್ಲೆ ನಡೆಸಿ ನಟೋರಿಯಸ್ ಗ್ಯಾಂಗ್​​ವೊಂದು ಆತನ ತಂದೆಯ ಮೂಲಕ ಬರೋಬ್ಬರಿ 15 ಲಕ್ಷ ರೂ. ವಸೂಲಿ ಮಾಡಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್ ಖಾತೆಯೊಂದರ ಕೋಟ್ಯಾಂತರ ಹಣ ಅಕ್ರಮ ವರ್ಗಾವಣೆ ಕೇಸ್​​ನಲ್ಲಿ ಬ್ಯಾಂಕ್ ಮ್ಯಾನೇಜರ್ ಸಿರಿನ್ ಮಧುಸೂಧನ್ ಎಂಬಾತ ಸದ್ಯ ಜೈಲು ಸೇರಿದ್ದಾನೆ. ಆದರೆ ಇದನ್ನೇ ಎನ್​ಕ್ಯಾಶ್ ಮಾಡಿಕೊಂಡಿರೋ ಜೈಲಿನಲ್ಲಿರೋ ಕೋಡಿಕೆರೆ ಗ್ಯಾಂಗ್ ಈವರೆಗೆ 15 ಲಕ್ಷ ವಸೂಲಿ ಮಾಡಿದೆ. ಗ್ಯಾಂಗ್​ನ ತಿಲಕ್, ಮಿಥುನ್, ಶಿವು, ನಿಖಿಲ್, ರಾಜು, ಚರಣ್ ಸೇರಿ ಎಂಟು ಮಂದಿ ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಸಿರಿನ್ ಇರೋ ಸೆಲ್​ನಲ್ಲೇ ಈ ಗ್ಯಾಂಗ್​ನ ತಿಲಕ್ ಮತ್ತಿತರರು ಇದ್ದು, ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಹಣ ಕೊಡದೇ ಇದ್ದರೆ ಕೊಲೆ ಮಾಡೋ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ಸಿರಿನ್ ಭೇಟಿಯ ವೇಳೆ ಈ ವಿಚಾರವನ್ನು ತಂದೆ ಪೌಲ್​ಗೆ ತಿಳಿಸಿದ್ದು, ಅವರು ಆತಂಕದಿಂದ ಜೈಲಿನ ಹೊರಗಿರುವ ಈ ಗ್ಯಾಂಗ್​ನ ಇಬ್ಬರಿಗೆ ಮೂರು ಕಂತಿನಲ್ಲಿ 15ಲಕ್ಷ ಕೊಟ್ಟಿದ್ದಾರೆ. ಆದರೆ ಮತ್ತೆ ಮತ್ತೆ ವಸೂಲಿಗೆ ನಿಂತ ಕಾರಣ ಸದ್ಯ ಅವರು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮೂವರನ್ನ ವಶಕ್ಕೆ ಪಡೆದಿದ್ದು, ಜೈಲು ಸಿಬ್ಬಂದಿ ಶಾಮೀಲಾತಿಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

0

Leave a Reply

Your email address will not be published. Required fields are marked *