ನೇಪಾಳಕ್ಕೆ ನೂರು ರೂಪಾಯಿ ಮುಖಬೆಲೆಯ ನೋಟ್​ ರವಾನೆ  

ನೂರು ರೂ. ಮುಖಬೆಲೆಯ ಒಂದು ಶತಕೋಟಿ ಮೌಲ್ಯದ ನೋಟುಗಳನ್ನು ನೇಪಾಳಕ್ಕೆ ಒದಗಿಸೋದಕ್ಕೆ ಆರ್​ಬಿಐ ಮುಂದಾಗಿದೆ. ನೇಪಾಳ ರಾಷ್ಟ್ರ ಬ್ಯಾಂಕ್​ ನೂರರ ನೋಟುಗಳ ಕೊರತೆಯನ್ನು ಎದುರಿಸ್ತಿದೆ. ನೂರರ ನೋಟುಗಳ ಸಮಸ್ಯೆಯ ನಿವಾರಣೆ ಸಲುವಾಗಿ ಆರ್​ಬಿಐ ಈ ಕ್ರಮಕ್ಕೆ ಮುಂದಾಗಿದೆ. ನವೆಂಬರ್ 8ರಂದು ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದಿಂದಾಗಿ ನೋಟು ಸರಬರಾಜು ಮಾಡುವಲ್ಲಿ ವಿಳಂಬವಾಗಿದ್ದು, ಭಾರತದಲ್ಲಿ ಪರಿಸ್ಥಿತಿ ಹತೋಟಿಗೆ ಬರುವವರೆಗೆ ಕಾಯುವಂತೆ ಎನ್​ಆರ್​​ಬಿಗೆ ಮನವಿ ಮಾಡಿದೆ. ನೋಟು ನಿಷೇಧದ ನಂತ್ರ ನೇಪಾಳದಲ್ಲಿ ಭಾರತದ 2000 ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ನೇಪಾಳದಿಂದ ಭಾರತಕ್ಕೆ ವೈದ್ಯಕೀಯ ಪರೀಕ್ಷೆಗೆ ಆಗಮಿಸುವವರಿಗೆ 25 ಸಾವಿರ ರೂ.ಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 

0

Leave a Reply

Your email address will not be published. Required fields are marked *