ಕನ್ನಡದ ಪ್ರಾಚೀನತೆ ನೂರು ವರ್ಷ ಹಿಂದಕ್ಕೆ…….!

ಬೆಂಗಳೂರು: ಕನ್ನಡದ ಪ್ರಾಚೀನತೆ ಕ್ರಿಸ್ತ ಶಕ 350-370ರ ಅವಧಿಯದ್ದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಪ್ರಣವೇಶ್ವರ ದೇವಾಲಯದ ಕಟಾಂಜನದಲ್ಲಿರುವ ಕನ್ನಡ ಬರಹವನ್ನು ಪತ್ತೆ ಹಚ್ಚಿರುವುದಾಗಿ ಪುರಾತತ್ವ ಇಲಾಖೆ ವೆಬ್​​ಸೈಟಿನಲ್ಲಿ ವರದಿಯಾಗಿದೆ. ಶಾತವಾಹನರ ಕಾಲದ ಪ್ರಣವೇಶ್ವರ ದೇವಾಲಯದಲ್ಲಿ ಈ ಬರಹವನ್ನು ಪತ್ತೆ ಹಚ್ಚಲಾಗಿದೆ. ಬೆಂಗಳೂರು ವಲಯದ ಪುರಾತತ್ವ ಇಲಾಖೆ ವರಿಷ್ಠಾಧಿಕಾರಿ ನಂಬಿರಾಜನ್ ನೇತೃತ್ವದಲ್ಲಿ ನಡೆದ ಉತ್ಖನನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಈ ಹಿಂದೆ ಖ್ಯಾತ ಇತಿಹಾಸಕಾರ ಪ್ರೊ. ಶೆಟ್ಟರ್ ಅವರು ಶಿವಮೊಗ್ಗ ಜಿಲ್ಲೆಯ ತ್ಯಾಗರ್ತಿಯಲ್ಲಿ ಕ್ರಿಸ್ತ ಶಕ 350ನೇ ಶತಮಾನದ ಶಾಸನ ಇರುವುದಾಗಿ ಹೇಳಿದ್ದರು. ಇನ್ನು ಈ ಕುರಿತು ತಜ್ಞರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಕನ್ನಡದ ಪ್ರಾಚೀನತೆಯ ಕುರಿತು ಮತ್ತೊಮ್ಮೆ ಕುತೂಹಲ ಮೂಡಿದೆ. 

0

Leave a Reply

Your email address will not be published. Required fields are marked *