ಸಾವಿರಾರು ವೃದ್ಧರಿಗೆ ದೃಷ್ಟಿ ಭಾಗ್ಯ ನೀಡಿದ ವಿದ್ಯಾರ್ಥಿಗಳು

ಸಾವಿರಾರು ಹಿರಿಯ ನಾಗರಿಕರಿಗೆ ವಿದ್ಯಾರ್ಥಿಗಳು ದೃಷ್ಟಿಭಾಗ್ಯ ನೀಡಿದ್ದಾರೆ.. ಸೋಶಿಯಲ್​ ಮೀಡಿಯಾ ಬಳಸಿಕೊಂಡು ಮತ್ತೊಬ್ಬರ ನಗುವಿಗೆ ಕಾರಣರಾಗಿದ್ದಾರೆ… ಇಷ್ಟಕ್ಕೂ ಆ ಮಕ್ಕಳು ಏನ್​ ಮಾಡಿದ್ರು ಅಂತೀರಾ ಈ ಸ್ಟೋರಿ ನೋಡಿ.

ಸಾಮಾನ್ಯವಾಗಿ ಶಾಲಾ ಮಕ್ಕಳು ಅಂದ್ರೆ ಆಟ ಪಾಠ ಅಂತ ಬ್ಯೂಸಿ ಇರ್ತಾರೆ. ಆದ್ರೆ ಡೆಲ್ಲಿ ನ್ಯೂ ಪಬ್ಲಿಕ್​ ಸ್ಕೂಲ್​ ವಿದ್ಯಾರ್ಥಿಗಳು ಇವೆಲ್ಲದ್ರ ಜೊತೆ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನ ಹೊತ್ತು, ಇತರಿಗೆಗೆ ಸ್ಪೂರ್ತಿಯಾಗಿದ್ದಾರೆ.. ಹೌದು, ರೋಟರಿ ಕ್ಲಬ್​ ಮತ್ತು ಗ್ಲೋಬ್ ಐ ಫೌಂಡೇಷನ್‍ ನಂಥ ಸೇವಾ ಸಂಸ್ಥೆ ಜೊತೆಯಾಗಿ ಫುಯೆಲ್‍ಡ್ರೀಮ್ ವೇದಿಕೆಯಲ್ಲಿ ಕ್ರೌಡ್‍ಫಂಡಿಂಗ್ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.. ಈ ಕಾರ್ಯಕ್ರಮದ ಮೂಲಕ ಡಿಪಿಎಸ್ ವಿದ್ಯಾರ್ಥಿಗಳು ತಾವೇ, ದೇಣಿಗೆ ಸಂಗ್ರಹಿಸಿದ್ದಾರೆ.. ದೇಣಿಗೆಯಿಂದ ಸಂಗ್ರಹವಾದ 25 ಲಕ್ಷ ರೂಪಾಯಿಯಲ್ಲಿ 2,500 ಹಿರಿಯ ನಾಗರಿಕರಿಗೆ ದೃಷ್ಟಿ ನೀಡಲು ಮುಂದಾಗಿದ್ದಾರೆ.

ಇತ್ತೀಚೆಗೆ ಎಲ್ಲರಲ್ಲೂ ದೃಷ್ಟಿ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ.. ಅದ್ರಲ್ಲೂ ಕ್ಯಾಟರ್ಯಾಕ್ಟ್ ಸರ್ಜರಿಗೂ ಹಣ ಹೊಂದಿಸಲಾಗದೇ ಅದೆಷ್ಟೋ ಹಿರಿಯ ನಾಗರಿಕರು ದೃಷ್ಟಿಯನ್ನು ಕಳೆದುಕೊಂಡು ಬದುಕುತ್ತಿದ್ದಾರೆ. ಹೀಗಾಗಿ, ಡಿಪಿಎಸ್​​ ಸ್ಕೂಲ್​ ವಿದ್ಯಾರ್ಥಿಗಳು ಸೇರಿ, ಫೇಸ್​ಬುಕ್​, ಟಿಟ್ವರ್​, ವಾಟ್ಸ್​​ಆಪ್​​ ಮೂಲಕ ಜಾಗೃತಿ ಮೂಡಿಸಿ, ದೇಣಿಗೆ ಸಂಗ್ರಹಿಸಿದ್ದಾರೆ.

ಒಟ್ಟಾರೆ, ವೇಗವಾಗಿ ಬೆಳೆಯುತ್ತಿರುವ ಈ ಜಗತ್ತಿನಲ್ಲಿ ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳ ಕುರಿತು ವಿದ್ಯಾರ್ಥಿಗಳಲ್ಲಿ ಸಂವೇದನೆ ಹುಟ್ಟುಹಾಕಬೇಕಾಗಿದೆ. ಇವ್ರ ಈ ವಿಶೇಷ ಕೆಲಸ ನಿಜಕ್ಕೂ ಮತ್ತೊಬ್ಬರಿಗೂ ಸ್ಪೂರ್ತಿಯಾಗಲಿದೆ..

ದೀಪಾ.ಎಸ್​ ಸುದ್ದಿಟಿವಿ, ಬೆಂಗಳೂರು

0

Leave a Reply

Your email address will not be published. Required fields are marked *