ಮೆಕ್ಯಾನಿಕಲ್ ಸ್ವೀಪರ್ ಮೆಷಿನ್​ ಕೆಲಸ ಸಕ್ಸಸ್

ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೆಕ್ಯಾನಿಕಲ್ ಸ್ವೀಪರ್ ಮಷಿನ್​ ಖರೀದಿ ಯೋಜನೆ ಈ ಬಾರಿ ಜಾರಿಗೊಂಡಿದೆ. 8 ದೊಡ್ಡ ಗಾತ್ರದ ಹಾಗೂ ಒಂದು ಸಣ್ಣ ಗಾತ್ರದ ರಸ್ತೆಯ ಕಸ ಗುಡಿಸುವ ಯಂತ್ರವನ್ನು ಖರೀದಿಸಿ ಮಾರ್ಚ್​ 16 ರಿಂದ ಕಾರ್ಯನಿರ್ವಹಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸ್ತಿರೋ ಈ ಮಷಿನ್​ಗಳು ಈಗಾಗಲೇ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿವೆ. ಸಣ್ಣ ಧೂಳಿನ ಕಣವೂ ಉಳಿಯದಂತೆ ರಸ್ತೆಯನ್ನು ಸ್ವಚ್ಛ, ಸುಂದರಗೊಳಿಸ್ತಿರೋದು ಯಂತ್ರದ ಕಾರ್ಯಕ್ಷಮತೆಯನ್ನು ತೋರಿಸ್ತಿದೆ. ಯಂತ್ರದ ಮುಂಭಾಗದಲ್ಲಿ ಪೊರಕೆ ರೀತಿಯ ಪ್ಲಾಸ್ಟಿಕ್ ವಸ್ತುವಿರುತ್ತೆ. ಅದರ ಎದುರಿನಲ್ಲಿಯೇ ಬ್ಲೋವರ್ ಅಳವಡಿಸಲಾಗಿರುತ್ತದೆ. ಯಂತ್ರ ಕಸ ಗುಡಿಸುತ್ತ ಮುಂದೇ ಸಾಗ್ತಿರೋವಾಗ ಬ್ಲೋವರ್ ಯಂತ್ರದೊಳಗೆ ತ್ಯಾಜ್ಯ ಶೇಖರಣೆಯಾಗುತ್ತೆ. ಇದರಿಂದ ಪೊರಕೆಯಲ್ಲಿ ಕಸ ಗುಡಿಸುವಾಗ ಉಂಟಾಗ್ತಿದ್ದ ಧೂಳಿನ ಪ್ರಮಾಣ ಕಡಿಮೆಯಾಗುತ್ತೆ. ಬಾಟಲ್, ಇಟ್ಟಿಗೆ ಮುಂತಾದ ಭಾರದ ವಸ್ತು, ಕಸವನ್ನೂ ಈ ಮೆಷಿನ್ ಮೂಲಕ ಸ್ವಚ್ಛಗೊಳಿಸಬಹುದು. ಅಷ್ಟೇ ಅಲ್ಲದೆ ವಾಹನದಟ್ಟಣೆ ಇರೋ ರಸ್ತೆಗಳಲ್ಲಿ ಪೌರಕಾರ್ಮಿಕರು ಅಪಘಾತಕ್ಕೀಡಾಗೋದನ್ನೂ ತಪ್ಪಿಸುತ್ತೆ.

ನಗರಾಭಿವೃದ್ಧಿ ಇಲಾಖೆಯ ಅನುದಾನದಿಂದ ತಲಾ 89 ಲಕ್ಷ ರುಪಾಯಿ ವೆಚ್ಚದ ಮಷಿನ್ ಖರೀದಿಸಲಾಗಿದೆ. ಅಲ್ಲದೆ ತಿಂಗಳ ನಿರ್ವಹಣೆ ವೆಚ್ಚ 4.3 ಲಕ್ಷ ರುಪಾಯಿ. ಒಂದು ಯಂತ್ರ ಒಂದು ದಿನದಲ್ಲಿ 50 ಕಿಮೀ ಉದ್ದದ ರಸ್ತೆ ಸ್ವಚ್ಛಗೊಳಿಸುತ್ತೆ. ಗಂಟೆಗೆ 8 ರಿಂದ 10 ಕಿ,ಮೀ ರಸ್ತೆಯನ್ನು ಸ್ವಚ್ಛಗೊಳಿಸುತ್ತೆ. ಒಟ್ಟಾರೆ ವೆಚ್ಚ ತಿಂಗಳಿಗೆ ಪೌರಕಾರ್ಮಿಕರಿಗಾದ್ರೆ 17 ಲಕ್ಷ ರುಪಾಯಿ, ಆದ್ರೆ ಮೆಕ್ಯಾನಿಕಲ್ ಸ್ವೀಪರ್ ಮೆಷಿನ್ ಕೇವಲ 6 ಲಕ್ಷ ರುಪಾಯಿಯಲ್ಲಿ ಈ ಕೆಲಸ ನಿರ್ವಹಿಸುತ್ತೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಟಿಪಿಎಸ್ ಟ್ರಕ್ ಮೌಂಟೆಡ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಆದ್ರೆ ಸೇವೆಯ ಗುಣಮಟ್ಟ ಪರಿಶೀಲಿಸಿ ಕಂತಿನ ರೂಪದಲ್ಲಿ ಹಣನೀಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಈವರೆಗೆ ಮೆಕ್ಯಾನಿಕಲ್ ಸ್ವೀಪರ್ ಮೆಷಿನ್ ಗುಣಮಟ್ಟದ ಸೇವೆಯನ್ನೇ ನಿರ್ವಹಿಸ್ತಿದೆ ಅಲ್ಲದೆ ತನ್ನ ಕೆಲಸದ ಸಂಪೂರ್ಣ ವೀಡಿಯೋ ಚಿತ್ರೀಕರಣ, ಹಾಗೂ ಬಿಬಿಎಂಪಿ ವೆಬ್​ಸೈಟ್​ನಲ್ಲಿ ಜಿಪಿಎಸ್​ ತಂತ್ರಜ್ಞಾನದ ಮೂಲಕ 9 ಮೆಷಿನ್​ಗಳು ಕೆಲಸ ಮಾಡುವ ಸ್ಥಳವನ್ನು ಗುರುತಿಸಬಹುದಾಗಿದೆ.

ಒಟ್ಟಿನಲ್ಲಿ ದೇಶದ ಪ್ರಮುಖ ನಗರಗಳಾದ ದೆಹಲಿ, ಅಹಮದಾಬಾದ್ ಮಾದರಿಯಲ್ಲಿ ಬೆಂಗಳೂರಲ್ಲೂ ಮೆಕ್ಯಾನಿಕಲ್ ಸ್ವೀಪರ್ ಮೆಷಿನ್ ಕೆಲಸ ಮಾಡ್ತಿದ್ದು, ತಜ್ಞರಿಂದಲೂ ಶಹಬ್ಬಾಸ್ ಗಿರಿ ಪಡೆದಿದೆ. ಈ ಯೋಜನೆ ಸಕ್ಸಸ್ ಆದಲ್ಲಿ ನಗರದ ಹೆಚ್ಚಿನ ರಸ್ತೆಗಳ ಕಸ ಗುಡಿಸೋದನ್ನು ಮೆಕ್ಯಾನಿಕಲ್ ಮಾಡುವ ಉದ್ದೇಶ ಬಿಬಿಎಂಪಿಗಿದ್ದು, ನಗರವನ್ನು ಹೈಟೆಕ್ ಮಾಡುವ ಹಾಗೂ ಪೌರಕಾರ್ಮಿಕರ ಅಪಾಯವನ್ನು ದೂರ ಮಾಡುವ ಚಿಂತನೆಯಿದೆ.

ಸೌಮ್ಯಶ್ರೀ ಮಾರ್ನಾಡ್, ಮೆಟ್ರೋ ಬ್ಯೂರೋ ಸುದ್ದಿ ಟಿವಿ

0

Leave a Reply

Your email address will not be published. Required fields are marked *